ಈರುಳ್ಳಿ

Allium cepa

ನೀರು ಹಾಕುವುದು
ಮಧ್ಯಮ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
80 - 150 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
6 - 7.5

ತಾಪಮಾನ
20°C - 25°C

ಗೊಬ್ಬರ ಬಳಕೆ
ಮಧ್ಯಮ

ಈರುಳ್ಳಿ

ಪರಿಚಯ

ಈರುಳ್ಳಿ ಗಟ್ಟಿಯಾದ ತಂಪು ಋತುವಿನ ದ್ವೈವಾರ್ಷಿಕ ಬೆಳೆ. ಆದರೆ ಸಾಮಾನ್ಯವಾಗಿ ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಅವು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ. ರೈತರು ಸಾಮಾನ್ಯವಾಗಿ ಬೀಜಗಳಿಂದ ಈರುಳ್ಳಿ ಬೆಳೆಯುತ್ತಾರೆ ಮತ್ತು ಸಸಿಗಳನ್ನು ನಾಟಿ ಮಾಡುತ್ತಾರೆ. ಈರುಳ್ಳಿ ಸೆಟ್ ಗಳನ್ನು ಮುಖ್ಯವಾಗಿ ಬೀಜ ಉತ್ಪಾದನೆಗೆ ಬಳಸಲಾಗುತ್ತದೆ. ಬೆಳೆದ ಪ್ರಭೇದದ ಅವಧಿ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ, ರೈತರು ವರ್ಷಕ್ಕೆ 3 ಬಾರಿ ಈರುಳ್ಳಿಯನ್ನು ಬೆಳೆಸಬಹುದು.

ಸಲಹೆ

ನಿಗಾವಣೆ

ನಿಗಾವಣೆ

ಬೇಸಾಯದ ಸಮಯದಲ್ಲಿ, ಕಳೆಗಳನ್ನು ತಗ್ಗಿಸಲು ಮತ್ತು ತೇವಾಂಶವನ್ನು ಹಿಡಿದಿಡಲು ಸಸ್ಯಗಳ ಸುತ್ತಲೂ ಹಸಿಗೊಬ್ಬರ ಹೊದಿಕೆಗಳನ್ನು ಇರಿಸಿ. ಆಳವಿಲ್ಲದ ಬೇರುಗಳು ನೀರನ್ನು ಹೀರಲು ನೆರವಾಗುವಂತೆ ಮಣ್ಣನ್ನು ತೇವವಾಗಿರಿಸಿ. ಗೆಡ್ಡೆಯ ಗಾತ್ರವನ್ನು ಹೆಚ್ಚಿಸಲು ಪ್ರತಿ ಕೆಲವು ವಾರಗಳಿಗೊಮ್ಮೆ ಸಾರಜನಕ ಗೊಬ್ಬರಗಳನ್ನು ಹಾಕಿ. ಮತ್ತು ಈರುಳ್ಳಿ ಮಣ್ಣನ್ನು ನೂಕಲು ಮತ್ತು ಗೆಡ್ಡೆ ಬೆಳೆಯಲು ಪ್ರಾರಂಭಿಸಿದಾಗ ಗೊಬ್ಬರ ಹಾಕುವುದನ್ನು ನಿಲ್ಲಿಸಿ. ಇಳುವರಿ ಸಮಯದಲ್ಲಿ, ಬೇರುಗಳನ್ನು ಕತ್ತರಿಸಬೇಕು ಮತ್ತು ಮೇಲ್ಭಾಗವನ್ನು 3 ಸೆಂ.ಮೀ ವರೆಗೆ ಕತ್ತರಿಸಬೇಕು. ಶೇಖರಣಾ ಪ್ರದೇಶದಲ್ಲಿ ಸಂಗ್ರಹಿಸುವ ಮೊದಲು ಗೆಡ್ಡೆಗಳನ್ನು ಹಲವಾರು ವಾರಗಳವರೆಗೆ ಒಣಗಲು ಬಿಡಿ. 5 ರಿಂದ 10 ° C ತಾಪಮಾನದಲ್ಲಿ ನೈಲಾನ್ ಚೀಲದಲ್ಲಿ ಸಂಗ್ರಹಿಸಿಡಿ. ಇದಲ್ಲದೆ, ಸೇಬು ಅಥವಾ ಪೇರಳೆ ಜೊತೆಗೆ ಈರುಳ್ಳಿಯನ್ನು ಸಂಗ್ರಹಿಸಬೇಡಿ.

ಮಣ್ಣು

ಯಶಸ್ವಿ ಈರುಳ್ಳಿ ಕೃಷಿಗೆ ಉತ್ತಮವಾಗಿ ನೀರು ಬಸಿಯುವ, ತೇವಾಂಶವನ್ನು ಹಿಡಿದಿಡುವ ಸಾಮರ್ಥ್ಯವಿರುವ ಮತ್ತು ಸಾಕಷ್ಟು ಸಾವಯವ ಪದಾರ್ಥಗಳನ್ನು ಹೊಂದಿರುವ ಉತ್ತಮವಾದ ಕಲಸು ಮತ್ತು ಮಕ್ಕಲು ಮಣ್ಣು ಒಳ್ಳೆಯದು. ಯಾವುದೇ ಮಣ್ಣಿನ ಪ್ರಕಾರವಾಗಲಿ ಸೂಕ್ತ ಪಿಹೆಚ್ ಶ್ರೇಣಿ 6.0 - 7.5 ಇರಬೇಕು. ಆದರೆ ಈರುಳ್ಳಿಯನ್ನು ಸೌಮ್ಯ ಕ್ಷಾರೀಯ ಮಣ್ಣಿನಲ್ಲಿ ಸಹ ಬೆಳೆಯಬಹುದು. ಈರುಳ್ಳಿಗೆ ಹೇರಳವಾದ ಸೂರ್ಯನ ಬೆಳಕು ಮತ್ತು ಉತ್ತಮ ಒಳಚರಂಡಿಯ ಅಗತ್ಯವಿರುತ್ತದೆ. ಈರುಳ್ಳಿ ಸಸ್ಯಗಳು ಎತ್ತರದ ಪಾತಿಗಳಲ್ಲಿ ಅಥವಾ ಕನಿಷ್ಠ 10 ಸೆಂ.ಮೀ ಎತ್ತರವಿರುವ ದಿಬ್ಬದ ಮಣ್ಣಿನ ಸಾಲುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.

ಹವಾಮಾನ

ಈರುಳ್ಳಿ ಸಮಶೀತೋಷ್ಣ ಬೆಳೆಯಾಗಿದೆ. ಆದರೆ ಸಮಶೀತೋಷ್ಣ, ಉಷ್ಣವಲಯ ಮತ್ತು ಉಪೋಷ್ಣವಲಯ ಹವಾಮಾನದಂತಹ ಹಲವು ಹವಾಮಾನ ಪರಿಸ್ಥಿತಿಗಳಲ್ಲಿ ಇದನ್ನು ಬೆಳೆಯಬಹುದು. ಅತೀ ಶೀತ ಮತ್ತು ಅತೀ ಉಷ್ಣತೆ ಮತ್ತು ಅತಿಯಾದ ಮಳೆಯಿಲ್ಲದ ಸೌಮ್ಯ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆದಾಗ್ಯೂ, ಈರುಳ್ಳಿ ಘನೀಕರಿಸುವ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಉತ್ತಮ ಬೆಳವಣಿಗೆಗೆ ಸುಮಾರು 70% ಸಾಪೇಕ್ಷ ಆರ್ದ್ರತೆಯ ಅಗತ್ಯವಿರುತ್ತದೆ. ಮಾನ್ಸೂನ್ ಅವಧಿಯಲ್ಲಿ ಉತ್ತಮವಾಗಿ ಹರಡಿರುವಂತಹ ಸರಾಸರಿ ವಾರ್ಷಿಕ ಮಳೆ 650-750 ಮಿ.ಮೀ ಇರುವ ಸ್ಥಳಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಈರುಳ್ಳಿಯ ಸಸ್ಯಕ ಬೆಳವಣಿಗೆಗೆ ಕಡಿಮೆ ತಾಪಮಾನ ಮತ್ತು ಕಡಿಮೆ ಹಗಲು (ಫೋಟೊಪೆರಿಯೊಡ್) ಅಗತ್ಯವಿದ್ದರೆ, ಗೆಡ್ಡೆಯ ಅಭಿವೃದ್ಧಿ ಮತ್ತು ಪಕ್ವತೆಯ ಹಂತದಲ್ಲಿ ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಹಗಲು ಬೆಳಕು ಬೇಕಾಗುತ್ತದೆ.

ಸಂಭವನೀಯ ರೋಗಗಳು

ಈರುಳ್ಳಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಈರುಳ್ಳಿ

Allium cepa

ಈರುಳ್ಳಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಈರುಳ್ಳಿ ಗಟ್ಟಿಯಾದ ತಂಪು ಋತುವಿನ ದ್ವೈವಾರ್ಷಿಕ ಬೆಳೆ. ಆದರೆ ಸಾಮಾನ್ಯವಾಗಿ ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಅವು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ. ರೈತರು ಸಾಮಾನ್ಯವಾಗಿ ಬೀಜಗಳಿಂದ ಈರುಳ್ಳಿ ಬೆಳೆಯುತ್ತಾರೆ ಮತ್ತು ಸಸಿಗಳನ್ನು ನಾಟಿ ಮಾಡುತ್ತಾರೆ. ಈರುಳ್ಳಿ ಸೆಟ್ ಗಳನ್ನು ಮುಖ್ಯವಾಗಿ ಬೀಜ ಉತ್ಪಾದನೆಗೆ ಬಳಸಲಾಗುತ್ತದೆ. ಬೆಳೆದ ಪ್ರಭೇದದ ಅವಧಿ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ, ರೈತರು ವರ್ಷಕ್ಕೆ 3 ಬಾರಿ ಈರುಳ್ಳಿಯನ್ನು ಬೆಳೆಸಬಹುದು.

ಪ್ರಮುಖ ಅಂಶಗಳು