ಆಲೂಗಡ್ಡೆ

Solanum tuberosum

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
75 - 120 ದಿನಗಳು

ಕೆಲಸ
ಹೆಚ್ಚು

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.2 - 6.4

ತಾಪಮಾನ
23°C - 25°C

ಗೊಬ್ಬರ ಬಳಕೆ
ಹೆಚ್ಚು

ಆಲೂಗಡ್ಡೆ

ಪರಿಚಯ

ಆಲೂಗಡ್ಡೆ ಮೂಲತಃ ದಕ್ಷಿಣ ಅಮೆರಿಕದ ಆಂಡಿಸ್ ನ ಬೆಳೆ. ಇದನ್ನು ಭಾರತದಲ್ಲಿ ಕಳೆದ 300 ವರ್ಷಗಳಿಂದ ಬೆಳೆಯುತ್ತಿದ್ದಾರೆ ಹಾಗೂ ಇಲ್ಲಿನ ಪ್ರಸಿದ್ಧ ಬೆಳೆಗಳಲ್ಲಿ ಇದೂ ಒಂದಾಗಿದೆ. ಈ ಗಿಡವನ್ನು ಗಡ್ಡೆಗೋಸ್ಕರವೇ ಬೆಳೆಸುತ್ತಾರೆ. ಆಲೂಗಡ್ಡೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಶಕ್ತಿ ಕೊಡುವ ತರಕಾರಿ. ಪಿಷ್ಟ, ಜೀವಸತ್ವಗಳು (ವಿಟಮಿನ್, ವಿಶೇಷವಾಗಿ ಸಿ ಹಾಗೂ ಬಿ1) ಮತ್ತು ಖನಿಜಾಂಶಗಳಿಂದಾಗಿ ಪೌಷ್ಟಿಕಾಂಶವೂ ಹೇರಳವಾಗಿದೆ. ಆಲೂಗಡ್ಡೆಯನ್ನು ಸ್ಟಾರ್ಚ್ ಮತ್ತು ಆಲ್ಕೋಹಾಲ್ ತಯಾರಿಕೆ ಮುಂತಾದ ಔದ್ಯಮಿಕ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಬಿತ್ತನೆಗೆ ರೋಗಮುಕ್ತ ಗಡ್ಡೆಗಳನ್ನು ಬಳಸುವುದು ಬಹಳ ಮುಖ್ಯ. ಗಿಡ ಬೆಳೆಯುವಷ್ಟರಲ್ಲಿ (ನೆಟ್ಟ ನಾಲ್ಕು ವಾರಗಳಲ್ಲಿ) ಕಳೆ ನಿರ್ಮೂಲನೆಯಾಗಿರಬೇಕು. ಪ್ರತಿ 15-20 ದಿನಕ್ಕೊಮ್ಮೆ ಗಿಡದ ಬುಡಕ್ಕೆ ಹೊಸ ಮಣ್ಣು ಸುರಿಯುವುದು ಕಳೆಯ ಬೆಳವಣಿಗೆಯನ್ನು ಮಿತಿಯಲ್ಲಿಡುವುದಕ್ಕಲ್ಲದೆ ಮಣ್ಣು ಸಡಿಲವಾಗಲೂ ಉಪಯೋಗವಾಗುತ್ತದೆ. ಆಲೂಗಡ್ಡೆಗೆ ಪೌಷ್ಡಿಕಾಂಶ ಹೆಚ್ಚು ಬೇಕಾಗುವುದರಿಂದ ಹಸಿ ಗೊಬ್ಬರದ ಬಳಕೆ ಒಳ್ಳೆಯದು. ಇದರ ಬೇರು ಹೆಚ್ಚು ಆಳಕ್ಕಿಳಿಯುವುದಿಲ್ಲ, ಹಾಗಾಗಿ ಲಘು ನೀರಾವರಿ ಸೂಕ್ತ. ಕೊಯ್ಲಿನ ಬಳಿಕ ಆಲೂಗಡ್ಡೆಯ ಸಿಪ್ಪೆಯಲ್ಲಿನ ತೇವಾಂಶವನ್ನು ತೆಗೆದುಹಾಕಲು 10-15 ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಆಲೂಗಡ್ಡೆ ಮಿಶ್ರಬೆಳೆಗೆ ಸೂಕ್ತ, ವಿಶೇಷವಾಗಿ ಕಬ್ಬು, ಈರುಳ್ಳಿ, ಸಾಸಿವೆ, ಗೋಧಿ, ನಾರಗಸೆ, ಸೋಂಪು – ಇವುಗಳ ಜೊತೆ.

ಮಣ್ಣು

ಲವಣಯುಕ್ತ ಮತ್ತು ಕ್ಷಾರಯುಕ್ತ ಮಣ್ಣುಗಳನ್ನು ಹೊರತುಪಡಿಸಿ ಬೇರೆ ಎಲ್ಲ ಬಗೆಯ ಮಣ್ಣಿನಲ್ಲೂ ಆಲೂಗಡ್ಡೆ ಬೆಳೆಯುತ್ತದೆ. ಗಡ್ಡೆ ಬೆಳೆಯಲು ಅಡ್ಡಿಯೊಡ್ಡದ ಸಡಿಲ ಮಣ್ಣು ಉತ್ತಮ. ನೀರು ಚೆನ್ನಾಗಿ ಹರಿದು ಹೋಗುವಂಥ, ಗಾಳಿ ಚೆನ್ನಾಗಿ ಆಡುವಂಥ ಹಾಗೂ ಸಾವಯವ ಪದಾರ್ಥ ಹೇರಳವಾಗಿರುವ ಕಳಿಮಣ್ಣು ಮತ್ತು ಮರಳು ಮಿಶ್ರಿತ ಕಳಿಮಣ್ಣು ಆಲೂಗಡ್ಡೆ ಬೆಳೆಯಲು ಹೆಚ್ಚು ಸೂಕ್ತ. 5.2ರಿಂದ 6.4 ರವರೆಗಿನ ಪಿ ಎಚ್ ಶ್ರೇಣಿ ಅತ್ಯುತ್ತಮ.

ಹವಾಮಾನ

ಆಲೂಗಡ್ಡೆಯು ಸಮಶೀತೋಷ್ಣ ಹವೆಯ ಬೆಳೆಯಾದರೂ ಕೂಡ ಭಿನ್ನ ಶ್ರೇಣಿಯ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆಯುವ ಸಾಮರ್ಥ್ಯ ಅದಕ್ಕಿದೆ. ಬೆಳೆಯುವ ಋತುವಿನ ಉಷ್ಣಾಂಶವು ಕೊಂಚ ತಣ್ಣಗಿರುವ ಸ್ಥಳಗಳಲ್ಲಿ ಮಾತ್ರವೇ ಇದನ್ನು ಬೆಳೆಸಲಾಗುತ್ತದೆ. ಕಾಂಡ, ಬೇರು ಮತ್ತು ಎಲೆಗಳು 24°ಸೆ ಉಷ್ಣಾಂಶದಲ್ಲಿ ಚೆನ್ನಾಗಿ ಬೆಳೆದರೆ ಗಡ್ಡೆ ಬೆಳೆಯಲು 20°ಸೆ ಉಷ್ಣಾಂಶ ಪ್ರಶಸ್ತ. ಹೀಗಾಗಿ ಆಲೂಗಡ್ಡೆಯನ್ನು ಬೆಟ್ಟ ಪ್ರದೇಶಗಳಲ್ಲಿ ಬೇಸಗೆಯ ಬೆಳೆಯಾಗಿಯೂ ಉಷ್ಣವಲಯ ಹಾಗೂ ಉಪೋಷ್ಣವಲಯದ ಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿಯೂ ಬೆಳೆಸುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 3000 ಮೀಟರಿನಷ್ಟು ಎತ್ತರದಲ್ಲಿ ಕೂಡ ಈ ಬೆಳೆಯನ್ನು ತೆಗೆಯಬಹುದು.

ಸಂಭವನೀಯ ರೋಗಗಳು

ಆಲೂಗಡ್ಡೆ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಆಲೂಗಡ್ಡೆ

Solanum tuberosum

ಆಲೂಗಡ್ಡೆ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಆಲೂಗಡ್ಡೆ ಮೂಲತಃ ದಕ್ಷಿಣ ಅಮೆರಿಕದ ಆಂಡಿಸ್ ನ ಬೆಳೆ. ಇದನ್ನು ಭಾರತದಲ್ಲಿ ಕಳೆದ 300 ವರ್ಷಗಳಿಂದ ಬೆಳೆಯುತ್ತಿದ್ದಾರೆ ಹಾಗೂ ಇಲ್ಲಿನ ಪ್ರಸಿದ್ಧ ಬೆಳೆಗಳಲ್ಲಿ ಇದೂ ಒಂದಾಗಿದೆ. ಈ ಗಿಡವನ್ನು ಗಡ್ಡೆಗೋಸ್ಕರವೇ ಬೆಳೆಸುತ್ತಾರೆ. ಆಲೂಗಡ್ಡೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಶಕ್ತಿ ಕೊಡುವ ತರಕಾರಿ. ಪಿಷ್ಟ, ಜೀವಸತ್ವಗಳು (ವಿಟಮಿನ್, ವಿಶೇಷವಾಗಿ ಸಿ ಹಾಗೂ ಬಿ1) ಮತ್ತು ಖನಿಜಾಂಶಗಳಿಂದಾಗಿ ಪೌಷ್ಟಿಕಾಂಶವೂ ಹೇರಳವಾಗಿದೆ. ಆಲೂಗಡ್ಡೆಯನ್ನು ಸ್ಟಾರ್ಚ್ ಮತ್ತು ಆಲ್ಕೋಹಾಲ್ ತಯಾರಿಕೆ ಮುಂತಾದ ಔದ್ಯಮಿಕ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

ಪ್ರಮುಖ ಅಂಶಗಳು