ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಹಸಿರು ಮತ್ತು ನೀಲಿ ಬೂಷ್ಟುಗಳು

Penicillium spp.

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಸಿಪ್ಪೆಯ ಮೇಲೆ ಮೃದುವಾದ ನೀರು ತುಂಬಿದ ಭಾಗ, ನಂತರ ಅದು ಬಿಳಿ ಬಣ್ಣದ ಬೂಷ್ಟಾಗಿ ಬೆಳೆಯುತ್ತದೆ.
  • ಬೂಷ್ಟಿನಲ್ಲಿ ನೀಲಿ ಅಥವಾ ಹಸಿರು ವಸ್ತು ಬೆಳೆಯುವುದು ಅದರ ವಿಶಿಷ್ಟ ಬಣ್ಣವನ್ನು ನೀಡುತ್ತದೆ.
  • ಗಾಯಗಳು ಹರಡುತ್ತವೆ ಮತ್ತು ಹಣ್ಣುಗಳು ಅಂತಿಮವಾಗಿ ಕೊಳೆಯುತ್ತವೆ ಮತ್ತು ಉದುರುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಮೊದಲು ಕಂಡುಬರುವ ರೋಗಲಕ್ಷಣಗಳೆಂದರೆ ಹಣ್ಣಿನ ಸಿಪ್ಪೆಯ ಮೇಲೆ ಮೃದುವಾದ ನೀರು ತುಂಬಿದ ಭಾಗದ ಬೆಳವಣಿಗೆ. ಕೆಲವು ದಿನಗಳ ನಂತರ, ಮೂಲ ಗಾಯದ ಮೇಲೆ ವೃತ್ತಾಕಾರದ ಮತ್ತು ಬಿಳಿ ಬಣ್ಣದ ಬೂಷ್ಟು ಇರುವ ಕಲೆ ಬೆಳೆಯುತ್ತದೆ ಮತ್ತು ಅದರ ವ್ಯಾಸ ಹಲವಾರು ಸೆಂಟಿಮೀಟರ್ಗಳಷ್ಟು ಇರುತ್ತದೆ. ಕ್ರಮೇಣ, ಬೂಷ್ಟು ಸಿಪ್ಪೆಯ ಮೇಲೆ ಹೊರಮುಖವಾಗಿ ಹರಡುತ್ತದೆ ಮತ್ತು ಮಧ್ಯಭಾಗದಲ್ಲಿರುವ ಹಳೆಯ ಭಾಗಗಳು ನೀಲಿ ಅಥವಾ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಅಕ್ಕಪಕ್ಕದ ಅಂಗಾಂಶಗಳು ಮೃದುವಾಗುತ್ತವೆ ಮತ್ತು ಅವುಗಳಲ್ಲಿ ನೀರು-ತುಂಬಿಕೊಳ್ಳುತ್ತದೆ ಅಥವಾ ಅಗಲವಾದ ಪಟ್ಟೆಯಿರುವ ಬಿಳಿ ಬಣ್ಣದ ಕವಕಜಾಲದಿಂದ ವಸಾಹತುವಾಗುತ್ತವೆ. ಹಣ್ಣಗಳು ಬೇಗನೆ ಹಾಳಾಗಿ ಉದುರುತ್ತವೆ ಅಥವಾ ಕಡಿಮೆ ಆರ್ದ್ರತೆಗಳಲ್ಲಿ ನಲುಗಿಕೊಂಡು ಸೊರಗಿಹೋಗುತ್ತದೆ.

Recommendations

ಜೈವಿಕ ನಿಯಂತ್ರಣ

ಸ್ಯೂಡೋಮೊನಸ್ ಸಿರಿಂಜ್ ಸ್ಟ್ರೈನ್ ESC-10 ಆಧರಿಸಿದ ಸೂತ್ರೀಕರಣಗಳನ್ನು ಬಳಸುವುದರಿಂದ ಶಿಲೀಂಧ್ರಗಳ ಜೈವಿಕ ನಿಯಂತ್ರಣವನ್ನು ಮಾಡಬಹುದು. ಅಗೆರಾಟಮ್ ಕಾಂಜಿಯೋಯಿಡ್ಸ್ ಸಸ್ಯದಿಂದ ಹೊರತೆಗೆಯುವ ಸಾರಗಳು ಸಹ ಬೂಷ್ಟುಗಳ ವಿರುದ್ಧ ಪರಿಣಾಮಕಾರಿಯಾಗುತ್ತವೆ. ಗಿಡಮೂಲಿಕೆ ಥೈಮಸ್ ಕ್ಯಾಪಿಟಟಸ್ ನಿಂದ ಹೊರತೆಗೆದ 'ಸಾರಭೂತ ತೈಲ’ ಮತ್ತು ನೀಮ್ ತೈಲವು ಇದೇ ರೀತಿಯ ಪರಿಣಾಮವನ್ನು ನೀಡುತ್ತದೆ. ಟೀ ಸಪೋನಿನ್ ಅನ್ನು ಸುರಕ್ಷಿತ ಸಂಯುಕ್ತವೆಂದು ಪರಿಗಣಿಸಲಾಗಿದೆ ಮತ್ತು ಸಿಟ್ರಸ್ ಹಣ್ಣಿನಲ್ಲಿ ಬರುವ ಕೊಯ್ಲಿನ-ನಂತರದ ಕೊಳೆತವನ್ನು ನಿಯಂತ್ರಿಸಲು ಇದನ್ನು ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಟಾವು ಮಾಡಿದ ಹಣ್ಣುಗಳನ್ನು 40-50 °ಸಿ ನಲ್ಲಿ ಮಾರ್ಜಕಗಳು ಅಥವಾ ದುರ್ಬಲವಾದ ಕ್ಷಾರ ದ್ರಾವಣಗಳ ಜೊತೆ ಕೆಲವು ಶಿಲೀಂಧ್ರನಾಶಕಗಳನ್ನು ಹಾಕಿ ತೊಳೆಯುವುದರಿಂದ ಹಣ್ಣು ಕೊಳೆತವನ್ನು ಕಡಿಮೆ ಮಾಡಬಹುದು. ಸೂಚಿಸಲಾಗುವ ಶಿಲೀಂಧ್ರನಾಶಕ ಸಂಯುಕ್ತಗಳೆಂದರೆ ಇಮಾಝಾಲ್ಲ್, ಥಾಯ್ಬೆಂಡಜೋಲ್ ಮತ್ತು ಬೈಫೀನೈಲ್.

ಅದಕ್ಕೆ ಏನು ಕಾರಣ

ಪಿನಿಸಿಲಿಯಂ ತಳಿಯ ಎರಡು ರೀತಿಯ ಶಿಲೀಂಧ್ರಗಳು ಸಿಟ್ರಸ್ ಹಣ್ಣುಗಳಲ್ಲಿ ಈ ವಿನಾಶಕಾರಿ ಕೊಳೆತವನ್ನುಂಟುಮಾಡುತ್ತವೆ. ಪಿ. ಇಟಾಲಿಕಾಮ್ ಮತ್ತು ಪಿ. ಡಿಜಿಟಟಮ್ ಹಣ್ಣಿನ ಚರ್ಮದ ಮೇಲೆ ನೀಲಿ ಬೂಷ್ಟು ಮತ್ತು ಹಸಿರು ಬೂಷ್ಟುಗಳಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ಪಿ. ಇಟಾಲಿಕಾಮ್ ನಿಂದಾದ ಗಾಯಗಳು ಪಿ. ಡಿಜಿಟಟಮ್ ನಿಂದಾಗುವ ಗಾಯಗಳಿಗಿಂತ ನಿಧಾನವಾಗಿ ಹರಡುತ್ತವೆ. ಅವುಗಳ ಬೆಳವಣಿಗೆಯನ್ನು ಗುರುತಿಸಲು, ಮಧ್ಯಭಾಗದಲ್ಲಿರುವ ಬಿಳಿ ಬಣ್ಣದ ಹಳೆಯ ಕವಕಜಾಲದ ಒಂದು ಪಟ್ಟೆಯ ಸುತ್ತ ಹೊಸದೊಂದು ಪಟ್ಟೆ ಬೆಳೆಯುವುದನ್ನು ಕಾಣಬಹುದು. ಈ ಶಿಲೀಂಧ್ರಗಳು ಅವಕಾಶವಾದಿಯಾಗಿದ್ದು, ಹಣ್ಣಿನ ಸಿಪ್ಪೆಯ ಮೇಲಿರುವ ಗಾಯಗಳ ಮೇಲೆ ತಮ್ಮ ಜೀವನ ಚಕ್ರವನ್ನು ಪ್ರಾರಂಭಿಸುತ್ತವೆ. ಗಾಯದ ಭಾಗದಿಂದ ನೀರು ಮತ್ತು ಪೋಷಕಾಂಶಗಳು ಬಿಡುಗಡೆಯಾಗುವುದರೊಂದಿಗೆ ಬೀಜಕಗಳು ಕುಡಿಯೊಡೆಯುತ್ತವೆ. 24 °ಸಿ ನ ಗರಿಷ್ಟ ಉಷ್ಣಾಂಶದಲ್ಲಿ, ಸೋಂಕು 48 ಗಂಟೆಗಳ ಒಳಗೆ ಬರುತ್ತದೆ ಮತ್ತು ಆರಂಭಿಕ ಲಕ್ಷಣಗಳು 3 ದಿನಗಳಲ್ಲಿ ಗೋಚರಿಸುತ್ತದೆ. ಯಾಂತ್ರಿಕವಾಗಿ ಅಥವಾ ನೀರು ಅಥವಾ ಗಾಳಿಯ ಮೂಲಕ ಬೀಜಕಗಳು ಹರಡಬಹುದು. ಈ ಬೀಜಕಗಳು ಹೆಚ್ಚಾಗಿ ಮಣ್ಣಿನಲ್ಲಿ ಬದುಕುತ್ತವೆ ಆದರೆ ಕಲುಷಿತ ಶೇಖರಣಾ ಸ್ಥಳಗಳ ಗಾಳಿಯಲ್ಲಿ ಸಹ ಕಂಡುಬರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಹಣ್ಣಿನ ಜೊತೆ ಕೆಲಸ ಮಾಡುವ ಸಮಯದಲ್ಲಿ ಹಣ್ಣಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ಹಣ್ಣಿನ ತೋಟದಿಂದ ಸೋಂಕಿತ ಹಣ್ಣುಗಳನ್ನು ತೆಗೆದುಹಾಕಿ.
  • ತಿರಸ್ಕರಿಸಿದ ಹಣ್ಣುಗಳನ್ನು ಪ್ಯಾಕಿಂಗ್ ಜಾಗದಿಂದ ದೂರವಿಡಬೇಕು.
  • ರೋಗದ ಬೆಳವಣಿಗೆಯನ್ನು ತಡೆಗಟ್ಟಲು ಶೇಖರಣೆಯ ಸಮಯದಲ್ಲಿ ಹಣ್ಣುಗಳನ್ನು ತಣ್ಣಗಿರಿಸಿ.
  • ಹೆಚ್ಚಿನ ತೇವಾಂಶ / ಕಡಿಮೆ ಉಷ್ಣಾಂಶ ಸ್ಥಿತಿಗಳಲ್ಲಿ ಹಣ್ಣುಗಳನ್ನು ಸಂಗ್ರಹಿಸಿ.
  • ಪ್ಯಾಕಿಂಗ್ ಮತ್ತು ಶೇಖರಣಾ ಸೌಲಭ್ಯಗಳಲ್ಲಿ ಉಪಕರಣಗಳನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕಗಳನ್ನು ಬಳಸಿ.
  • ಮಳೆ ಬರುವಾಗ ಅಥವಾ ಬಂದ ನಂತರ ಕೊಯ್ಲು ಮಾಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ