ಎಲೆಕೊರಕ ನುಸಿ - ಟೊಮೆಟೊ

ಟೊಮೆಟೊ

ಎಲೆಕೊರಕ ನುಸಿ

Agromyzidae


ಸಂಕ್ಷಿಪ್ತವಾಗಿ

 • ಎಲೆಗಳ ಮೇಲೆ ನಾಳಗಳಿಂದ ಬೇರ್ಪಡಿಸಲ್ಪಟ್ಟ ಅನಿಯಮಿತ, ಅಂಕುಡೊಂಕಾದ ಬೂದುಬಣ್ಣದ ಸಾಲುಗಳು ಕಾಣಿಸಿಕೊಳ್ಳುತ್ತವೆ.
 • ಎಲೆಗಳು ಅಕಾಲಿಕವಾಗಿ ಉದುರಬಹುದು.

ರೋಗಲಕ್ಷಣಗಳು

ಮರಿಹುಳುಗಳು ತಿನ್ನತೊಡಗಿದಂತೆ ಎಲೆಯ ದಳದ ಎರಡೂ ಭಾಗಗಳಲ್ಲಿ ಅನಿಯಮಿತವಾದ ಅಥವಾ ಅಂಕುಡೊಂಕಾದ ತಿಳಿ ಬೂದುಬಣ್ಣದ ರೇಖೆಗಳು ಕಂಡುಬರುತ್ತವೆ. ಈ ಕೀಟಗಳು ಎಲೆಯ ಮೇಲೆ ಕೊರೆಯುವ ಮಾರ್ಗಗಳಿಗೆ ಸಾಮಾನ್ಯವಾಗಿ ಎಲೆಯ ನಾಳಗಳು ತಡೆಯಾಗಿರುತ್ತದೆ. ಈ ಕೊರೆತದ ಜಾಡಿನ ಒಳಭಾಗದಲ್ಲಿ ನುಸಿಯ ಮಲದಿಂದಾಗಿ ಕಪ್ಪು ಬಣ್ಣದ ತೆಳುಗೆರೆಯೊಂದು ಕಂಡುಬರುತ್ತದೆ. ಸಂಪೂರ್ಣ ಎಲೆಗಳೇ ತೂತುಗಳಿಂದ ಮುಚ್ಚಿಕೊಳ್ಳಬಹುದು. ಹಾನಿಗೊಳಗಾದ ಎಲೆಗಳು ಅಕಾಲಿಕವಾಗಿ (ಎಲೆಗಳಚುವಿಕೆ) ಉದುರಬಹುದು. ಎಲೆಗಳಚುವಿಕೆಯು ಇಳುವರಿ ಮತ್ತು ಹಣ್ಣಿನ ಗಾತ್ರವನ್ನು ಕಡಿಮೆ ಮಾಡುತ್ತದೆ ಮತ್ತು ಹಣ್ಣು ಸೂರ್ಯನ ಬೆಳಕಿಗೆ ಹಾನಿಯಾಗುತ್ತದೆ.

ಪ್ರಚೋದಕ

ಅಗ್ರೊಮೈಝಿಡೇ ಕುಟುಂಬಕ್ಕೆ ಸೇರಿದ ಹಲವಾರು ನೊಣಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಈ ಎಲೆಕೊರಕವು ವಿಶ್ವದಾದ್ಯಂತ ಹಲವು ಸಾವಿರ ವಿವಿಧ ಜಾತಿಗಳಿರುವ ನುಸಿ. ವಸಂತಕಾಲದಲ್ಲಿ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ, ಸಮಾನ್ಯವಾಗಿ ಅಂಚಿನಲ್ಲಿ. ಮೇಲಿನ ಮತ್ತು ಕೆಳ ಮೇಲ್ಮೈ ನಡುವಿನ ಭಾಗವನ್ನು ಮರಿಹುಳವು ಆಹಾರ ಮಾಡಿಕೊಳ್ಳುತ್ತದೆ. ಮರಿಹುಳು ಎಲೆಯನ್ನು ತಿನ್ನುತ್ತಾ ಹೋದಂತೆ ಅಂಕುಡೊಂಕು ಜಾಡಿನ ಕಿರಿದಾದ ಬಿಳಿಯ ಸುರಂಗಗಳು ಎಲೆಯ ಮೇಲೆ ರೂಪುಗೊಳ್ಳುತ್ತವೆ. ಈ ಜಾಡಿನ ಉದ್ದಕ್ಕೂ ಮರಿಹುಳುವಿನ ಮಲದಿಂದಾಗಿ ಕಪ್ಪು ಬಣ್ಣದ ತೆಳುಗೆರೆ ಕಂಡುಬರುತ್ತದೆ. ಅವು ಪ್ರೌಢಾವಸ್ಥೆಗೆ ತಲುಪಿದ ನಂತರ, ಮರಿಹುಳುಗಳು ಎಲೆಯ ತಳಭಾಗದಲ್ಲಿ ರಂಧ್ರವೊಂದನ್ನು ತೆರೆದು ನೆಲದ ಮೆಳೆ ಬೀಳುತ್ತವೆ, ಮತ್ತು ಅಲ್ಲಿ ಕೋಶಾವಸ್ಥೆಗೆ ಜಾರುತ್ತದೆ. ಗಿಡದ ಅವಶೇಷ ಅಥವಾ ಆಶ್ರಯದಾತ ಗಿಡದ ಬಳಿ ಬಿದ್ದ ಎಲೆಗಳು ಕೋಶಾವಸ್ಥೆಗೆ ಹೋಗುವಂತಹ ಪರ್ಯಾಯ ಜಾಗಗಳು. ಹಳದಿ ಬಣ್ಣವೆಂದರೆ ಎಲೆಕೊರಕಗಳಿಗೆ ಆಕರ್ಷಣೆ.

ಜೈವಿಕ ನಿಯಂತ್ರಣ

ಹಾನಿ ಸಣ್ಣದಾಗಿದ್ದರೆ ಗಿಡದ ಅಂದಕ್ಕೆ ಧಕ್ಕೆಯುಂಟಾಗುತ್ತದೆಯಷ್ಟೇ ಹೊರತು ಬೆಳೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸುರಂಗಗಳಲ್ಲಿ ಎಲೆ-ಕೊರಕಗಳ ಲಾರ್ವಾವನ್ನು ಕೊಲ್ಲುವ ಪರಾವಲಂಬಿ ಕಣಜಗಳು ವಾಣಿಜ್ಯಿಕವಾಗಿ ಲಭ್ಯವಿವೆ. ಲೇಡಿ ಬರ್ಡ್ ಗಳು ಎಲೆಕೊರಕ ನೊಣದ ಪರಭಕ್ಷಕಗಳಾಗಿವೆ. ಬೇವಿನ ಎಣ್ಣೆ, ಬೇವಿನ ಬೀಜದ ಕಷಾಯ (NSKE 5%), 5 ಮಿಲೀ / ಲೀ ನಷ್ಟು ಬೇವಿನ ಎಣ್ಣೆ (15000 ಪಿಪಿಎಂ) ಅಥವಾ ಸ್ಪಿನೊಸಡ್ ಗಳು ಪ್ರೌಢ ಕೀಟಗಳು ಆಹಾರ ತಿನ್ನುವುದನ್ನು ತಡೆದು ಮೊಟ್ಟೆಗಳನ್ನು ಇಡುವುದನ್ನು ಕಡಿಮೆ ಮಾಡುತ್ತವೆ, ಹೀಗೆ ಹಾನಿಗಳನ್ನು ಸೀಮಿತಗೊಳಿಸುತ್ತವೆ. ನೈಸರ್ಗಿಕ ಶತ್ರುಗಳು ಮತ್ತು ಪರಾಗಸ್ಪರ್ಶಕಗಳ ಮೇಲೆ ಈ ಉತ್ಪನ್ನಗಳು ಕಡಿಮೆ ಪರಿಣಾಮ ಬೀರುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಆರ್ಗನೋಫಾಸ್ಫೇಟ್ಗಳು, ಕಾರ್ಬಾಮೇಟ್ಗಳು ಮತ್ತು ಪೈರೆಥ್ರಾಯ್ಡ್ ಕುಟುಂಬಗಳವಿಶಾಲ- ರೋಹಿತ ಕೀಟನಾಶಕಗಳು ಪ್ರೌಢ ನುಸಿ ಮೊಟ್ಟೆಯಿಡದಂತೆ ತಡೆದರೂ ಮರಿಹುಳುಗಳನ್ನು ಕೊಲ್ಲುವುದಿಲ್ಲ. ಇದಲ್ಲದೆ, ಅವು ನೈಸರ್ಗಿಕ ಶತ್ರುಗಳ ಇಳಿಕೆಗೆ ಕಾರಣವಾಗಬಹುದು ಮತ್ತು ನುಸಿಯಲ್ಲಿ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗಬಹುದು, ಕೆಲವು ಸಂದರ್ಭಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಬಹುದು. ಅಬಮೆಕ್ಟಿನ್, ಬೈಫೆಂಥ್ರಿನ್, ಮೆಥೊಕ್ಸಿಎಫೆನಜೈಡ್, ಕ್ಲೋರಂಟ್ರಾನಿಲಿಪ್ರೋಲ್ ಅಥವಾ ಸ್ಪಿನೆಟರಾಮ್ನಂತಹ ಉತ್ಪನ್ನಗಳನ್ನು ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಸರದಿಯಂತೆ ಬಳಸಬಹುದು.

ಮುಂಜಾಗ್ರತಾ ಕ್ರಮಗಳು

 • ಎಲೆಕೊರಕ ಮುಕ್ತ ಸಸಿಗಳನ್ನು ನೆಡಿ.
 • ನುಸಿ ಎರಗಿರುವ ತೋಟದ ಪಕ್ಕ ಪರ್ಯಾಯ ಆಶ್ರಯದಾತ ಸಸಿಗಳನ್ನು ನೆಡದಿರಿ.
 • ಜಿಗುಟಾದ ಹಳದಿ ಬಣ್ಣದ ಬಲೆಗಳನ್ನು ಬಳಸಿ ಅಥವಾ ಹಳದಿ ಬಣ್ಣದ ಬಟ್ಟಲು/ಬೋಗುಣಿಗಳಲ್ಲಿ ನೀರು ತುಂಬಿಸಿ ಇಡಿ.
 • ಗಿಡಗಳನ್ನು ಪರಿಶೀಲಿಸಿ ದಾಳಿಯಾಗಿರುವ ಎಲೆಗಳನ್ನು ಹುಡುಕಿ ಕಿತ್ತು ನಾಶ ಮಾಡಿ.
 • ಸುತ್ತಲೂ ಹೂಬಿಡುವ ಗಿಡಗಳನ್ನು ಬೆಳೆಸಿ ನುಸಿಗಳಿಗೆ ತಡೆಯೊಡ್ಡಿ.
 • ಜಮೀನಿನ ಸುತ್ತಮುತ್ತ ಇರುವ ಕಳೆಗಳನ್ನು ತೆಗೆದುಹಾಕಿ.
 • ಈ ಕೀಟಕ್ಕೆ ಆಶ್ರಯ ನೀಡದ ಗಿಡಗಳನ್ನು ಸರದಿ ಬೆಳೆಯಾಗಿ ಬಳಸಿ.
 • ಗಿಡದ ಸುತ್ತಲೂ ಹಸಿ ಎಲೆಯ ಪದರವನ್ನು ಹರಡುವುದರ ಮೂಲಕ ನುಸಿಗಳು ಮಣ್ಣಿನಲ್ಲಿ ವಂಶೋತ್ಪತ್ತಿ ನಡೆಸುವುದನ್ನು ತಪ್ಪಿಸಿ.
 • ಮಣ್ಣನ್ನು ಉತ್ತು ನುಸಿಗಳನ್ನು ನೈಸರ್ಗಿಕ ಶತ್ರುಗಳಿಗೆ ಒಡ್ಡಿ.
 • ನುಸಿ ಎರಗಿದ ಗಿಡದ ಭಾಗಗಳನ್ನು ಸುಟ್ಟು ಹಾಕಿ.
 • ಹಳೆಯ ಬೆಳೆಯ ಉಳಿಕೆಗಳಲ್ಲಿ ನುಸಿ ಮನೆ ಮಾಡುವ ಸಾಧ್ಯತೆ ಇರುವುದರಿಂದ ಅದನ್ನು ನಾಶ ಮಾಡಿ.
 • ನೈಸರ್ಗಿಕ ಶತ್ರುಗಳಿಗೆ ಹಾನಿ ಮಾಡಬಹುದಾದ ವಿಶಾಲ-ರೋಹಿತ ಕೀಟನಾಶಕಗಳನ್ನು ಬಳಸಬೇಡಿ.

ಪ್ಲಾಂಟಿಕ್ಸ್ ಜಾದೂವನ್ನು ಈಗ ಪ್ರಯತ್ನಿಸಿ!

ವಾಟ್ಸ್ ಆಪ್ ನಲ್ಲಿ ಉಚಿತ ಬೆಳೆ ರೋಗನಿರ್ಣಯ

ನಿಮ್ಮ ಬೆಳೆಯ ಚಿತ್ರವನ್ನು ನಮಗೆ ವಾಟ್ಸ್ ಆಪ್ ನಲ್ಲಿ ಕಳುಹಿಸಿ ಮತ್ತು ನಮ್ಮ ಬೆಳೆ ವೈದ್ಯ ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಂಬಿ, ಇದು ಉಚಿತ!

ವಾಟ್ಸಾಪ್ ನಲ್ಲಿ ಉಚಿತ ರೋಗನಿರ್ಣಯ ಮಾಡಿಸಿ!