ಹತ್ತಿ

ತಂಬಾಕು ಕ್ಯಾಟರ್ಪಿಲ್ಲರ್

Spodoptera litura

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೀಟ ತಿಂದಿರುವುದರಿಂದ ಅತಿಯಾದ ಹಾನಿ.
  • ಎಲೆಗಳಚುವಿಕೆ.
  • ಬೂದು-ಕಂದು ಬಣ್ಣದ ದೇಹಗಳು ಮತ್ತು ವೈವಿಧ್ಯಮಯ ಮುಂದಿನ ರೆಕ್ಕೆಗಳನ್ನು ಹೊಂದಿರುವ ಪತಂಗಗಳು.
  • ಮೇಲಿನ ಎಲೆಗಳಲ್ಲಿ ಮೊಟ್ಟೆಯ ಗೊಂಚಲುಗಳು.

ಇವುಗಳಲ್ಲಿ ಸಹ ಕಾಣಬಹುದು

39 ಬೆಳೆಗಳು
ಸೇಬು
ಬಾಳೆಹಣ್ಣು
ಹುರುಳಿ
ಹಾಗಲಕಾಯಿ
ಇನ್ನಷ್ಟು

ಹತ್ತಿ

ರೋಗಲಕ್ಷಣಗಳು

ಹೊಸದಾಗಿ ಮೊಟ್ಟೆಯೊಡೆದು ಬಂದ ಲಾರ್ವಾಗಳು ಎಲೆಗಳನ್ನು ತುಂಬ ತಿಂದು ಹಾಕುತ್ತವೆ. ಎಲೆ ಅಂಗಾಂಶವನ್ನು ಕೆರೆದು ಗಿಡವನ್ನು ಸಂಪೂರ್ಣವಾಗಿ ಖಾಲಿ ಮಾಡಿಬಿಡುತ್ತವೆ. ಬೆಳೆದ ಲಾರ್ವಾಗಳು ಹಗಲಲ್ಲಿ ಚದುರಿ ಹೋಗಿ ರಾತ್ರಿಯ ಹೊತ್ತು ಎಲೆಗಳನ್ನು ತಿನ್ನುತ್ತವೆ. ದಿನದಲ್ಲಿ ಅವು ಸಾಮಾನ್ಯವಾಗಿ ಗಿಡದ ಬುಡದ ಸುತ್ತಲಿರುವ ಮಣ್ಣಿನಲ್ಲಿ ಅವಿತುಕೊಳ್ಳುತ್ತವೆ. ಸಡಿಲ ಮಣ್ಣಿನಲ್ಲಿ ಲಾರ್ವಾಗಳು ಬೀಜಕೋಶಗಳನ್ನು ತಲುಪಿ ಹಾನಿಗೊಳಿಸಬಹುದು. ಹುಳಗಳು ಗಿಡವನ್ನು ಅತಿಯಾಗಿ ತಿನ್ನುವುದರಿಂದ, ಕೇವಲ ಎಲೆ ತೊಟ್ಟುಗಳು ಮತ್ತು ರೆಂಬೆಗಳು ಮಾತ್ರ ಉಳಿದಿರುತ್ತದೆ.

Recommendations

ಜೈವಿಕ ನಿಯಂತ್ರಣ

ಟ್ರೈಕೊಗ್ರಾಮ ಚಿಲೋನಿಸ್ ಜಾತಿಯ ಪರಾವಲಂಬಿ ಕಣಜಗಳು, ಟೆಲೀನೋಮಸ್ ರೆಮಸ್ ಅಥವಾ ಅಪಾಂಟೆಲೀಸ್ ಆಫ್ರಿಕಾನಸ್ ಕೀಟದ ಮೊಟ್ಟೆಗಳನ್ನು ಅಥವಾ ಲಾರ್ವಾಗಳನ್ನು ತಿನ್ನುತ್ತವೆ. ನ್ಯೂಕ್ಲಿಯರ್ ಪಾಲಿಹೆಡ್ರೊಸಿಸ್ ವೈರಸ್ (NPV) ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಆಧರಿಸಿದ ಸಾವಯವ ಕೀಟನಾಶಕಗಳು ಸಹ ಚೆನ್ನಾಗಿ ಕೆಲಸ ಮಾಡುತ್ತವೆ. ಪರ್ಯಾಯವಾಗಿ, ಕೀಟ ರೋಗಕಾರಕ ಶಿಲೀಂಧ್ರಗಳಾದ ನೊಮುರಿಯಾ ರಿಲೀ ಮತ್ತು ಸೆರೆಟಿಯ ಮಾರ್ಸೆಸೆನ್ಸ್ ಗಳನ್ನು ಎಲೆಗಳಿಗೆ ಸಿಂಪಡಿಸಬಹುದಾಗಿದೆ. ಕೀಟಗಳನ್ನು ಆಕರ್ಷಿಸಿ ಹಿಡಿದು ಹಾಕಲು ಅಕ್ಕಿ ಹೊಟ್ಟು, ಮೊಲಾಸಿಸ್ ಅಥವಾ ಅಶುದ್ಧ ಸಕ್ಕರೆಯಿಂದ (ಬ್ರೌನ್ ಶುಗರ್) ತಯಾರಿಸಿದ ದ್ರಾವಣವನ್ನು ಸಂಜೆ ಹೊತ್ತಿನಲ್ಲಿ ಮಣ್ಣಿನ ಮೇಲೆ ಹರಡಬಹುದು. ಬೇವಿನ ಎಲೆ ಅಥವಾ ಬೀಜಗಳ ತೈಲ ಸಾರಗಳು ಹಾಗೂ ಪೊಂಗಮಿಯಾ ಗ್ಲಾಬ್ರಾ ಬೀಜಗಳ ಸಾರಗಳು ನೆಲಗಡಲೆಯ ಎಲೆಗಳ ಮೇಲಿರಬಹುದಾದ ಈ ಕೀಟಗಳ ಲಾರ್ವಾದ ವಿರುದ್ಧ ಹೆಚ್ಚು ಪರಿಣಾಮಕಾರಿ. ಉದಾಹರಣೆಗೆ, 5ಮಿಲೀ/ಲೀ ನಷ್ಟು 1500 ppm ಅಜಡಿರಾಕ್ಟಿನ್ ಅಥವಾ NSKE 5% ಅನ್ನು ಮೊಟ್ಟೆಯ ಹಂತದಲ್ಲಿ ಬಳಸಿಕೊಳ್ಳಬಹುದು ಮತ್ತು ಅದು ಮೊಟ್ಟೆಯನ್ನು ಒಡೆಯುವುದರಿಂದ ತಡೆಯುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೀಟನಾಶಕದ ಅತಿಯಾದ ಬಳಕೆ ಕೀಟದಲ್ಲಿ ಪ್ರತಿರೋಧ ಬೆಳೆಯುವುದಕ್ಕೆ ಕಾರಣವಾಗಬಹುದು. ಎಳೆ ಲಾರ್ವಾಗಳನ್ನು ನಿಯಂತ್ರಿಸಲು, ಹಲವಾರು ವಿಧದ ಕೀಟನಾಶಕಗಳನ್ನು ಬಳಸಬಹುದು, ಉದಾಹರಣೆಗಾಗಿ ಕ್ಲೋರಿಪಿರಿಫೋಸ್ (2.5 ಮಿಲೀ/ಲೀ), ಎಮೆಟಿಕ್ಟಿನ್ (0.5 ಗ್ರಾಂ/ಲೀ), ಫ್ಲುಬೆಂಡೈಮೈಡ್ (0.5 ಮಿಲೀ/ಲೀ), ಅಥವಾ ಕ್ಲೋರಂಟ್ರಾನಿಲಿಪ್ರೋಲ್ (0.3 ಮಿಲೀ/ಲೀ) ಜೊತೆಗೆ ಇಂಡೊಕ್ಸೈಕಾರ್ಬ್ ಮತ್ತು ಬೈಫೆಂಥ್ರಿನ್. ಬೈಟ್ ದ್ರಾವಣಗಳು ಸ್ವಲ್ಪ ಬೆಳೆದ ಲಾರ್ವಾಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆಮಾಡುತ್ತವೆ, ಉದಾಹರಣೆಗೆ ವಿಷಯುಕ್ತ ಬೈಟ್ (5 ಕೆಜಿ ಅಕ್ಕಿ ಹೊಟ್ಟು + 1/2 ಕೆಜಿ ಬೆಲ್ಲ + 500 ಮಿಲೀ ಕ್ಲೋರಿಪಿರೊಸ್).

ಅದಕ್ಕೆ ಏನು ಕಾರಣ

ಪ್ರೌಢ ಪತಂಗಗಳು ಬೂದುಬಣ್ಣ ಮಿಶ್ರಿತ ಕಂದು ದೇಹಗಳನ್ನು ಹೊಂದಿರುತ್ತವೆ. ಮುಂದಿನ ರೆಕ್ಕೆ ವಿವಿಧ ಬಣ್ಣಗಳಿಂದ ಕೂಡಿರುತ್ತದೆ ಹಾಗೂ ಅಂಚುಗಳ ಮೇಲೆ ಬಿಳಿಯ ಬಣ್ಣದ ಅಲೆಯಲೆಯಾದ ಗುರುತುಗಳಿರುತ್ತವೆ. ಹಿಂದಿನ ರೆಕ್ಕೆಗಳು ಅರೆಪಾರದರ್ಶಕ ಬಿಳಿಯ ಬಣ್ಣದಲ್ಲಿರುತ್ತವೆ. ಅಂಚುಗಳು ಮತ್ತು ನಾಳಗಳ ಉದ್ದಕ್ಕೂ ಕಂದು ಬಣ್ಣದ ರೇಖೆಗಳಿರುತ್ತವೆ. ಹೆಣ್ಣು ಕೀಟವು ಎಲೆಯ ದಳಗಳಲ್ಲಿ ಗುಂಪಾಗಿ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ಬಂಗಾರ ಮಿಶ್ರಿತ ಕಂದು ಬಣ್ಣದ ಪೊರೆ ಮುಚ್ಚಿರುತ್ತದೆ. ಮೊಟ್ಟೆಯೊಡೆದ ಕೂಡಲೆ ಕೂದಲುರಹಿತ ತಿಳಿ ಹಸಿರು ಲಾರ್ವಾಗಳು ಬೇಗನೆ ಚದುರಿ ಎಲೆಗಳನ್ನು ತಿನ್ನತೊಡಗುತ್ತವೆ. ಬೆಳೆದ ಲಾರ್ವಾಗಳ ಮೈಬಣ್ಣ ಕಡು ಹಸಿರು ಬಣ್ಣದಿಂದ ಹಿಡಿದು ಕಂದು ಬಣ್ಣದವರೆಗೆ ಇರುತ್ತದೆ. ಮಗ್ಗುಲಲ್ಲಿ ಗಾಢ ಬಣ್ಣದ ಚುಕ್ಕೆಗಳಿದ್ದರೆ ಹೊಟ್ಟೆಯ ಭಾಗ ಹೆಚ್ಚೂಕಡಿಮೆ ತಿಳಿಯಾಗಿರುತ್ತದೆ. ಎರಡೂ ಬದಿಗಳಲ್ಲಿ ಹಳದಿ ಬಣ್ಣದ ಎರಡು ಉದ್ದವಾದ ಪಟ್ಟೆಗಳಿದ್ದು, ನಡುವೆ ಅಲ್ಲಲ್ಲಿ ಕಪ್ಪುಬಣ್ಣದ ತ್ರಿಕೋನಾಕಾರದ ಚುಕ್ಕೆಗಳಿರುತ್ತವೆ. ಹಿಂಬದಿಯಿಂದ ಈ ಚುಕ್ಕೆಗಳ ನಡುವೆ ಒಂದು ಕಿತ್ತಳೆ ಬಣ್ಣದ ಪಟ್ಟೆಯನ್ನು ಎಳೆದಂತಿರುತ್ತದೆ. ರಾತ್ರಿಯಲ್ಲಿ ಲಾರ್ವಾಗಳು ಆಹಾರ ತಿಂದು ಹಗಲಿನಲ್ಲಿ ಮಣ್ಣಿನಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಮರಿಗಳು ಮತ್ತು ಪ್ರೌಢ ಕೀಟವು 15 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಳೆಯುತ್ತವೆ, 25 ಡಿಗ್ರಿ ಸೆಲ್ಸಿಯಸ್ ಸೂಕ್ತವಾದುದು. ಕಡಿಮೆ ತೇವಾಂಶ ಮತ್ತು ಹೆಚ್ಚಿನ ಅಥವಾ ಕಡಿಮೆ ತಾಪಮಾನವು ಸಂತಾನಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಜೀವನ ಚಕ್ರವನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಾರುಕಟ್ಟೆಯಲ್ಲಿ ಸಹಿಷ್ಣು ಪ್ರಭೇದಗಳನ್ನು ಹುಡುಕಿ.
  • ಕೀಟದ ಸಂಖ್ಯೆ ಹೆಚ್ಚಿರುವ ಸಮಯವನ್ನು ತಪ್ಪಿಸಲು ಬೇಗನೆ ಬಿತ್ತನೆ ಮಾಡಿ.
  • ಮಧ್ಯದಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ನಿಯಮಿತವಾಗಿ ನೀರಾವರಿ ಮಾಡಿ.
  • ಸೂರ್ಯಕಾಂತಿ, ಟಾರೋ ಮತ್ತು ಕ್ಯಾಸ್ಟರ್ ಆಯಿಲ್ ಗಿಡಗಳನ್ನು ತೋಟದ ಸುತ್ತ ಹಾಗೂ ತೋಟದ ನಡುವೆ ಬೆಳೆಸಿ.
  • ಈ ಗಿಡಗಳು ಪ್ರಮುಖ ಬೆಳೆಯ ಮೇಲೆ ದಾಳಿಯಾಗುವುದನ್ನು ತಪ್ಪಿಸುತ್ತವೆ.
  • ಪತಂಗಗಳನ್ನು ಆಕರ್ಷಿಸಲು ಬೆಳಕಿನ ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
  • ಮೊಟ್ಟೆಯ ರಾಶಿಗಳು, ಲಾರ್ವಾ ತಿಂದು ಆದ ಹಾನಿ ಅಥವಾ ಲಾರ್ವಾಗಳ ಇರುವಿಕೆಯಂತಹ ರೋಗದ ಕುರುಹುಗಳಿಗಾಗಿ ನಿಮ್ಮ ತೋಟವನ್ನು ಪರಿಶೀಲಿಸಿ.
  • ಮೊಟ್ಟೆಯ ರಾಶಿಗಳನ್ನು ಮತ್ತು ಲಾರ್ವಾಗಳನ್ನು ಗಿಡಗಳಿಂದ ತೆಗೆದು ಅವುಗಳನ್ನು ನಾಶಮಾಡಿ.
  • ಬಿತ್ತನೆ ಮಾಡಿದ 15-20 ದಿನಗಳ ನಂತರ ಕಳೆಯನ್ನು ತೆಗೆದುಹಾಕಿ.
  • ಕೃಷಿ ಸಮಯದಲ್ಲಿ ನಿಮ್ಮ ಗಿಡಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ ಮತ್ತು ಗಿಡಗಳಿಗೆ ಹಾನಿಯಾಗುವುದಾಗಲಿ ಮತ್ತು ಗಾಯಗಳಾಗುವುದಾಗಲಿ ತಪ್ಪಿಸಿ.
  • ನಿಮ್ಮ ಉಪಕರಣಗಳು ಮತ್ತು ಸಲಕರಣೆಗಳ ನೈರ್ಮಲ್ಯವನ್ನು ನೋಡಿಕೊಳ್ಳಿ.
  • ನೆಲವನ್ನು ಆಳವಾಗಿ ಉತ್ತು ಕೀಟದ ಪ್ಯೂಪಾಗಳನ್ನು ನೈಸರ್ಗಿಕ ಶತ್ರುಗಳು ಮತ್ತು ಹವಾಮಾನ-ಸಂಬಂಧಿ ಅಂಶಗಳಿಗೆ ಒಡ್ಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ