Fall Armyworm

ಪರಿಸ್ಥಿತಿ

ಫಾಲ್ ಆರ್ಮಿವರ್ಮ್ ( ಹುಸಿ ಸೈನಿಕ ಹುಳು) ಒಂದು ಆಕ್ರಮಣಶೀಲ ಕಂಬಳಿಹುಳ. ಅಮೇರಿಕ ಖಂಡದ ಸ್ಥಳಿಯ ಹುಳುವಾದ ಇದು, ಆಫ್ರಿಕವನ್ನು ವಶಪಡಿಸಿಕೊಂಡ ನಂತರ ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಮತ್ತು ದೂರದ ಪೂರ್ವಕ್ಕೆ ಹರಡಿ ಮುಂದುವರಿದಿದೆ. ಅದರ ದಾರಿಯಲ್ಲಿ, ಫಾಲ್ ಆರ್ಮಿವರ್ಮ್ ವಿಶೇಷವಾಗಿ ಜೋಳ, ಹುಲ್ಲು ಜೋಳ, ಸಿರಿಧಾನ್ಯದ ಪೈರುಗಳಿಗೆ ಭಾರೀ ಹಾನಿ ಉಂಟುಮಾಡಿ ಲಕ್ಷಾಂತರ ರೈತರನ್ನು ಬಡತನಕ್ಕೆ ತಳ್ಳಿತು. ಕಳೆದ ವಾರಗಳಲ್ಲಿ ದೃಢೀಕರಿಸಿದ ಪ್ರಕರಣಗಳು ಭಾರತದಿಂದ ನಮಗೆ ವರದಿಯಾಗಿದೆ ಮತ್ತು ಅದು ನಿರಂತರವಾಗಿ ಹರಡುತ್ತಿದೆ ಎಂದು ನಮ್ಮ ಮಾದರಿಗಳು ತೋರಿಸುತ್ತಿವೆ. ಈ ಕಾರಣಕ್ಕಾಗಿ, ಫಾಲ್ ಆರ್ಮಿವರ್ಮ್ ಗಾಗಿ ನಾವು ಮೊದಲ ನೇರ ಕೀಟ ಟ್ರಾಕಿಂಗ್ ಉಪಕರಣವನ್ನು ಅಬಿವೃದ್ಧಿ ಮಾಡಿರುವೆವು. ಕ್ರಮಕೈಗೊಳ್ಳಲು ನಿಮಗೆ ಸಾಕಷ್ಟು ಸಮಯ ಸಿಗುವಂತೆ, ನೈಜ್ಯ ಸಮಯದಲ್ಲಿ ನಿಮ್ಮನ್ನು ಎಚ್ಚರಿಸಿ ನಿಮಗೆ ಮಾಹಿತಿ ನೀಡುವೆವು. ನಾವು ನಮ್ಮ ತಜ್ಞರ ಜಾಲದ ಸಹಯೋಗದಲ್ಲಿ Plantix ರೋಗ ಮಾಹಿತಿ ಕೈಪಿಡಿಯನ್ನು ನವೀಕರಿಸಿದ್ದೇವೆ. ಇತ್ತೀಚಿನ ಬೆಳೆ ನಿರ್ದಿಷ್ಟ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳನ್ನು ಪಡೆಯಲು ಇಲ್ಲಿ ನೋಡಿ.

ಸಂಕ್ಷಿಪ್ತವಾಗಿ

  • ಸಸ್ಯದ ಎಲ್ಲಾ ಭಾಗಗಳಲ್ಲೂ ಕೀಟ ತಿಂದು ಬಿಟ್ಟಿರುವ ಹಾನಿ.
  • ಚಿಂದಿಚಿಂದಿಯಾದ ಎಲೆ ಅಂಚುಗಳು.
  • ಎಲೆಗಳಚುವಿಕೆ.

We provide this interactive map to embed on your website.
Insert the following code and share this information:

<iframe width="400px" height="300px" src="https://plantix.net/maps/Fall-Army-Worm-expert-annotation.html"></iframe>

ಡೇಟಾ ಮೂಲ: Plantix ಎಂಬ ರೈತರ ಆಪ್ ನೊಂದಿಗೆ, ನಾವು ಕೇವಲ ಭಾರತದಿಂದಲೇ ಪ್ರತಿದಿನ 20 ಸಾವಿರಕ್ಕಿಂತ ಹೆಚ್ಚು ಚಿತ್ರಗಳನ್ನು ಸ್ವೀಕರಿಸುತ್ತೇವೆ. ಈ ಡೇಟಾವನ್ನು ನಾವು ಎಲ್ಲಾ ಪಾಲುದಾರರೊಂದಿಗೆ ಹಂಚಿಕೊಳ್ಳುವ ಒಳನೋಟಗಳನ್ನು ಉತ್ಪಾದಿಸಲು ಉಪಯೋಗಿಸುತ್ತೇವೆ. ನೇರ ಟ್ರಾಕಿಂಗ್ ನಕ್ಷೆಯಲ್ಲಿ ತೋರಿಸಿರುವ ಏಲ್ಲಾ ದತ್ತಾಂಶಗಳು ತಜ್ಞರಿಂದ ಮೌಲ್ಯೀಕರಿಸಲಾಗಿದೆ. ಎಲ್ಲಾ ನಿರ್ದೇಶಾಂಕಗಳು 10 ಕಿ. ಮೀ ನಷ್ಟು ನಿಖರತೆಗೆ ಅನಾಮಧೇಯಗೊಳಿಸಲಾಗಿವೆ ಮತ್ತು ಡೇಟಾ ಪ್ರತಿ ದಿನ ನವೀಕರಿಸಲಾಗುತ್ತದೆ. ಕಚ್ಚಾ ಡೇಟಾ ಪಡೆಯಲು ಅಥವ ನಿಮ್ಮ ಡೇಟಾವನ್ನು ನಕ್ಷೆಗೆ ಸೇರಿಸಲು ದಯವಿಟ್ಟು contact@peat.ai ಅನ್ನು ಸಂಪರ್ಕಿಸಿ.