ಬಾಳೆಹಣ್ಣು

ಬಾಳೆಯ ಕೈಸೋಪ ಕೀಟ (ಲೇಸ್ ವಿಂಗ್ ಬಗ್)

Stephanitis typica

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮೇಲಿನ ಬದಿಯಲ್ಲಿ ಅತೀ ಸಣ್ಣದಾದ, ಬಿಳಿ ಕ್ಲೋರೋಟಿಕ್ ಕಲೆಗಳು.
  • ಎಲೆಯ ಕೆಳ ಭಾಗದಲ್ಲಿ ಗಾಢ ಬಣ್ಣದ ಸ್ರವಿಸುವಿಕೆ.
  • ಎಲೆಗಳು ಹಳದಿಯಾಗುತ್ತವೆ ಮತ್ತು ಬಾಡುತ್ತವೆ.
  • ಪ್ರೌಢ ಕೀಟಗಳು ಅರೆಪಾರದರ್ಶಕ, ಫ್ರಿಂಜ್ ಆಗಿರುವ ಲೇಸ್ ತರಹದ ರೆಕ್ಕೆಗಳಿಂದ ಹಳದಿ ಅಥವಾ ಬಿಳಿ ಬಣ್ಣದಲ್ಲಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಎಲೆಗಳ ಮೇಲಿನ ಸೋಂಕು ದೂರದಿಂದಲೂ ಗೋಚರಿಸುತ್ತದೆ. ವಯಸ್ಕ ಮತ್ತು ಮರಿಹುಳುಗಳು ಎಲೆಯ ಕೆಳ ಭಾಗದಲ್ಲಿ ಇರುತ್ತವೆ ಮತ್ತು ಅಲ್ಲಿಯೇ ಗುಂಪುಗುಂಪಾಗಿ ನಲೆಸಿರುತ್ತವೆ ಹಾಗು ಎಲೆಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ, ಕೀಟಗಳು ಮಧ್ಯನಾಳದ ಸುತ್ತಮುತ್ತ ಎಲೆಯ ಸಾರವನ್ನು ಹೀರುತ್ತವೆ. ಕೀಟಗಳ ಆಹಾರ ಅಭ್ಯಾಸದಿಂದ ಆದ ಹಾನಿಯು ಎಲೆಯ ಮೇಲ್ಭಾಗದಲ್ಲಿ ಸಣ್ಣ ಬಿಳಿ, ಕ್ಲೋರೋಟಿಕ್ ಚುಕ್ಕೆಗಳಂತೆ ಕಂಡುಬರುತ್ತದೆ. ಕಪ್ಪನೆಯ ಕೀಟ ಸ್ರಾವಗಳು ಎಲೆ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಕೀಟಗಳು ಇರುವ ಪ್ರದೇಶಗಳು ಕಾಲಾನಂತರದಲ್ಲಿ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಮರಗಳು ಕುಂಠಿತ ಬೆಳವಣಿಗೆ ಹೊಂದಿದ್ದು, ರೋಗಗ್ರಸ್ತವಾದಂತೆ ಕಾಣುತ್ತವೆ.

Recommendations

ಜೈವಿಕ ನಿಯಂತ್ರಣ

ಸ್ಟೆಥೊಕೊನಸ್ ಪ್ರೆಫೆಕ್ಟಸ್ ನಂತಹ ಪರಭಕ್ಷಕ ಕೀಟ ಜಾತಿಗಳನ್ನು ಸಮಗ್ರ ವಿಧಾನದಲ್ಲಿ ಬಳಸಿದರೆ ಸೋಂಕನ್ನು ತಗ್ಗಿಸಬಹುದು. ಬೇವಿನ ಎಣ್ಣೆ ಮತ್ತು ಬೆಳ್ಳುಳ್ಳಿ (2%) ಯ ಮಿಶ್ರಣವನ್ನು ಸೋಂಕನ್ನು ನಿಯಂತ್ರಿಸಲು ಎಲೆಗಳ ಸಿಂಪಡಣೆಯಾಗಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೀಟನಾಶಕಗಳ ಬಳಕೆ ಈ ರೋಗದ ವಿರುದ್ಧ ಹೋರಾಡುವ ಸಾಮಾನ್ಯ ವಿಧಾನವಾಗಿದೆ. ಡಿಮಿಥೊಯೇಟ್ ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಲು ಬಳಸಬಹುದು. ಎಲೆಗಳ ಕೆಳ ಭಾಗ ಆವರಿಸುವಂತೆ ಇದನ್ನು ಸಿಂಪಡಿಸಬೇಕು.

ಅದಕ್ಕೆ ಏನು ಕಾರಣ

ವಯಸ್ಕ ಕೀಟಗಳು ಹಳದಿ ಬಣ್ಣದಿಂದ ಬಿಳಿ ಬಣ್ಣದ್ದಾಗಿದ್ದು, ಗಾತ್ರದಲ್ಲಿ ಸುಮಾರು 4 ಮಿಮೀ ಇರುತ್ತದೆ. ಅರೆಪಾರದರ್ಶಕವಾದ, ಅಂಚಿರುವ ಲೇಸ್ ತರಹದ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ಜೀರುಂಡೆಯು ಎಲೆಗಳ ಕೆಳ ಭಾಗದಲ್ಲಿ ಸುಮಾರು 30 ಮೊಟ್ಟೆ ಇಡುತ್ತದೆ. ಸುಮಾರು ಹನ್ನೆರಡು ದಿನಗಳ ನಂತರ ಮೊಟ್ಟೆ ಒಡೆದು ಹಳದಿ ಮರಿಹುಳುಗಳು ಹೊರಬರುತ್ತವೆ. ಈ ಬೆಳವಣಿಗೆಯ ಹಂತವು ಸುಮಾರು 13 ದಿನಗಳವರೆಗೆ ಇರುತ್ತದೆ. ಪ್ರಸ್ತುತ, ಬಾಳೆಯ ಕೈಸೋಪ ಸೋಂಕಿನಿಂದಾಗಿ ಬಾಳೆಯಲ್ಲಿ ಇಳುವರಿ ನಷ್ಟವಾದ ಕುರಿತು ಯಾವುದೇ ವಿವರವಾದ ಮಾಹಿತಿ ಇಲ್ಲ. ಈವರೆಗೆ, ಕೀಟದಿಂದ ಬಾಳೆ ಸಸ್ಯಗಳಿಗೆ ಗಂಭೀರ ಹಾನಿಯಾದ ಬಗ್ಗೆ ಯಾವುದೇ ವರದಿಗಳಿಲ್ಲ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳು ಲಭ್ಯವಿದ್ದರೆ ಅವುಗಳನ್ನೇ ನೆಡಿ.
  • ಕೀಟಗಳ ಚಿಹ್ನೆಗಾಗಿ ನಿಯಮಿತವಾಗಿ ನಿಮ್ಮ ಸಸ್ಯಗಳನ್ನು ಅಥವಾ ಜಾಗಗಳನ್ನು ಪರಿಶೀಲಿಸುತ್ತಿರಿ.
  • ಸೋಂಕು ಮುಂದುವರೆಯುವುದನ್ನು ನಿಗ್ರಹಿಸಲು ಮೊದಲಿಗೆ ಸೋಂಕಿಗೆ ಒಳಗಾದ ಎಲೆಯ ಹೊರ ಸುರುಳಿಯನ್ನು ಕಿತ್ತುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ